ನೆನಪಿನ ಅಲೆಗಳ ಜೊತೆ ನನ್ನ ಪಯಣ

ನೆನಪಿನ ಅಲೆಗಳ ಜೊತೆ ನನ್ನ ಪಯಣ

ಬುಧವಾರ, ಮಾರ್ಚ್ 18, 2009

ಕಾಣುವ ಕನಸೆಲ್ಲ ನನಸಾಗದು .........ಕಾಣದ ಗೆಳತಿಯೇ ಕೇಳೆ ನಿನಗಾಗಿ ಬರೆದಿರುವೆ ಈ ಕವನ


ಕಾಣೆನೆಂಬ ಕಾರಣಕ್ಕೆ ಮರೆಯದಿರು ನೀ ನನ್ನ


ಮನಬಿಚ್ಚಿ ಹೇಳುತೀನಿ ಕಿವಿಗೊಟ್ಟು ಕೆಳುತಿಯ ನಾನೊಬ್ಬ ಭಾವಜೀವಿ ,


ಜೊತೆ-ಜೊತೆಗೆ ಸ್ನೇಹ ಜೀವಿ .


ಭಾವನೆಗಳ ಲೋಕದಲ್ಲಿ ಕನಸಿನ ಕಾಮನಬಿಲ್ಲಿನ ಮೇಲೆ ನನ್ನ ಬದುಕು .


ನೀ ಸ್ನೇಹ ಜೀವಿಯಾದರೆ ಕಳಿಸೆನ್ನ ಲೋಕಕೊಂದು ನಿನ್ನ ನೆನಪು .


ಮನಸ್ಸು ಬಿಚ್ಚಿ ನಾ ನುಡಿವೆ ನನ್ನ ಭಾವನೆ ನೂರು ,


ಸವಿ ನೆನಪಲ್ಲೇ ಕಟ್ಟಿಕೊಡುವೆ ಸ್ನೇಹವೆಂಬ ತೇರು ,


ತೆರೆದ ಹೃದಯದಲ್ಲಿ ನಿನಗಾಗಿ ಬರೆದಿರುವೆ ಈ ಓಲೆ


ಮನಸಿಟ್ಟು ಪ್ರೀತಿಯಿಂದ ನೀನಿದನು ಓದು ನನ್ನ ನಲ್ಲೆ ,


ನಿನಗಿಷ್ಟವಾದರೆ ಮನಸಿನ ಭಾವನೆಯೆ ಈ ಕವನ ನಿನಗಿದೋ ನನ್ನ ಸಿಹಿ ಚುಂಬನ ........